ಭಾರತದಲ್ಲಿ ಪರ್ವತಾರೋಹಣ ಸಂಸ್ಥೆಗಳು	

ಪರ್ವತಾರೋಹಣದ ಚಟುವಟಿಕೆಗಳಿಗಾಗಿಯೂ, ಇದರ ಪ್ರಚಾರ ಮತ್ತು ಬೆಳವಣಿಗೆಗಾಗಿಯೂ ನವದೆಹಲಿಯಲ್ಲಿ ಇಂಡಿಯನ್ ಮೌಂಟನಿಯರಿಂಗ್ ಫೌಂಡೇಷನ್ ಸ್ಥಾಪಿತವಾಗಿದೆ. ಇದರ ಅನುಮತಿ ಇಲ್ಲದೆ ಭಾರತದಲ್ಲಿ ಯಾವ ಪರ್ವತಾರೋಹಣವನ್ನೂ ಮಾಡಲಾಗುವುದಿಲ್ಲ. ಪರ್ವತಾರೋಹಣದ ಶಿಕ್ಷಣ ಮತ್ತು ತರಬೇತಿಗಾಗಿ ಈ ಕೆಳಕಂಡ ನಾಲ್ಕು ಸಂಸ್ಥೆಗಳು ಸ್ಥಾಪಿತವಾಗಿವೆ:

1. ಹಿಮಾಲಯನ್ ಮೌಂಟನಿಯರಿಂಗ್ ಇನ್ಸಿಸ್ಟಿಟ್ಯೂಟ್. ಡಾರ್ಜೀಲಿಂಗ್, ಜವಹರ್ ಪರ್ಬತ್, ಡಾರ್ಜಿಲಿಂಗ್-732101, 
   ಪಶ್ಚಿಮ ಬಂಗಾಳ.
2. ನೆಹರು ಇನ್‍ಸ್ಟಿಟ್ಯೂಟ್ ಆಫ್ ಮೌಂಟನಿಯರಿಂಗ್, ಉತ್ತರ ಕಾಶಿ, ಉತ್ತರಾಂಚಲ
3. ಡೈರೆಕ್ಟೋರೇಟ್ ಆಫ್ ಮೌಂಟನಿಯರಿಂಗ್ ಅಂಡ್ ಅಲೈೀಡ್ ಸ್ಪೋಟ್ರ್ಸ್, ಮನಾಲಿ-175131, ಹಿಮಾಚಲ ಪ್ರದೇಶ
4. ಜವಹರ್ ಇನ್‍ಸ್ಟಿಟ್ಯೂಟ್ ಆಫ್ó ಮೌಂಟನಿಯರಿಂಗ್, ಬಟೋಟೆ, ಜಮ್ಮು ಮತ್ತು ಕಾಶ್ಮೀರ. ಇವು ಸಾರ್ವಜನಿಕರಿಗಾಗಿದ್ದು, ಮತ್ತೆ ಕೆಲವು ರಕ್ಷಣಾ ಪಡೆಗಳಿಗೇ ಮೀಸಲಾದ ತರಬೇತಿ ಸಂಸ್ಥೆಗಳೂ ಇವೆ.

 ಇವುಗಳಲ್ಲಿ 1954ರಲ್ಲೇ ಸ್ಥಾಪಕವಾದ ಡಾರ್ಜಿಲಿಂಗ್‍ನ ಹಿಮಾಲಯ ಮೌಂಟನಿಯರಿಂಗ್ ಇನ್ಸ್‍ಸ್ಟಿಟ್ಯೂಟ್, ಎವರೆಸ್ಟ್ ಶಿಖರವನ್ನು ಪ್ರಪ್ರಥಮವಾಗಿ ಏರಿದ ತೇನ್‍ಸಿಂಗ್ ನಾರ್ಗೆÀ ನೇತೃತ್ವದಲ್ಲಿ ಆರಂಭವಾಯಿತು. ಈ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಪರ್ವತಾರೋಹಣದ ಪ್ರಾಥಮಿಕ ಮತ್ತು ಉನ್ನತ ತರಬೇತಿಗಳೂ ಶಿಕ್ಷಕರಾಗುವವರಿಗೆ ಮಾರ್ಗದರ್ಶಕ ತರಬೇತಿ(ಮೆಥಡ್ ಆಫ್ó ಇನ್ಸ್ಟ್ರಕ್ಷನ್ ಕೋರ್ಸ್)ಯನ್ನೂ ಉತ್ತರಕಾಶಿಯಲ್ಲಿ ವಿಶೇಷ ತರಬೇತಿಯಾದ ಶೋಧನೆ ಮತ್ತು ರಕ್ಷಣೆ ತರಬ್ಭೆತಿಯನ್ನು(ಸರ್ಚ್ ಅಂಡ್ ರೆಸ್ಕ್ಯೂ ಕೋರ್ಸ್) ಪಡೆಯಬಹುದಾಗಿದೆ. ಬಾಲಕ ಬಾಲಕಿಯರಿಗೆ ಸಾಹಸ ತರಬೇತಿ ಹಾಗೂ ಸ್ಕೀಯಿಂಗ್ ತರಬೇತಿಯನ್ನು ಮನಾಲಿಯಲ್ಲಿ ನೀಡಲಾಗುತ್ತದೆ,. ಇತ್ತೀಚೆಗೆ ಪ್ರಚಲಿತವಾಗಿರುವ ಕೃತಕ ಗೋಡೆ ಹತ್ತುವÀ ಕ್ರೀಡೆಗಾಗಿ (ಸ್ಪೋರ್ಟ್ ಕ್ಲೈಂಬಿಂಗ್), ಮಾರ್ಗ ಸೂಚಕ (ರೂಟ್ ಸೆಟ್ಟರ್ಸ್), ಮತ್ತು ತೀರ್ಪುಗಾರರಿಗೆ ತರಬ್ಭೆತಿಯನ್ನು ಸಹ ಈ ಸಂಸ್ಥೆಯಲ್ಲಿ ನೀಡಲಾಗುತ್ತದೆ.
ವಿವಿಧ ರಾಜ್ಯಗಳಲ್ಲಿ ಇಂಡಿಯನ್ ಮೌಂಟನಿಯರಿಂಗ್ ಫೌಂಡೇಷನ್‍ನ ಸಹಭಾಗಿಯಾಗಿರುವ ಅನೇಕ ಖಾಸಗಿ ಸಂಘಗಳೂ ಸಹ ಪರ್ವತಾರೋಹಣದ ಚಟುವಟಿಕೆಗಳಲ್ಲಿ ಕಾರ್ಯ ನಿರತವಾಗಿವೆ. ಇವುಗಳ ಅಂಕಿ ಅಂಶ ಈ ರೀತಿ ಇದೆ. ಆಂಧ್ರಪ್ರದೇಶ-3, ಅಸ್ಸಾಂ-5, ಅರುಣಾಚಲ ಪ್ರದೇಶ-1, ಬಿಹಾರ-7, ಪಶ್ಚಿಮ ಬಂಗಾಳ-82, ದೆಹಲಿ-15, ಗುಜರಾತ್-8, ಹರಿಯಾಣ-4, ಹಿಮಾಚಲ ಪ್ರದೇಶ-2, ಜಮ್ಮು ಕಾಶ್ಮೀರ-7, ಕರ್ನಾಟಕ-6, ಮಧ್ಯ ಪ್ರದೇಶ-1, ಮಹಾರಾಷ್ಟ್ರ-38, ಮಣಿಪುರ-2, ಮಿಜೋರಾಮ್-1, ಒರಿಸ್ಸಾ-1, ಪಂಜಾಬ್-1, ರಾಜಸ್ಥಾನ-7, ಸಿಕ್ಕಿಂ-1, ಉತ್ತರಪ್ರದೇಶ-2, ಉತ್ತರಾಂಚಲ-7. ಪರ್ವತಾರೋಹಣದ ಮಾಹಿತಿಗೆ ಮತ್ತು ಅನುಮತಿಗೆ ಈ ಸಂಘಗಳ ಮೂಲಕ ಇಂಡಿಯನ್ ಮೌಂಟನಿಯರಿಂಗ್ ಫೌಂಡೇಷನ್‍ನನ್ನು ಸಂಪರ್ಕಿಸಬಹುದು.
	
ಇಲ್ಲಿ ಕಾಣುವಂತೆ ಹೆಚ್ಚು ಸಂಘಗಳನ್ನು ಹೊಂದಿರುವ ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಈ ಚಟುವಟಿಕೆಗಳು ಹೆಚ್ಚು. ಪ್ರೋತ್ಸಾಹವೂ ಬಹಳ. ದಕ್ಷಿಣ ಭಾರತದಲ್ಲಿ ಹೆಚ್ಚಿನ ಚಟುವಟಿಕೆಗಳು ನಡೆಯುತ್ತಿರುವುದು ಕರ್ನಾಟಕದಲ್ಲಿ. ರಾಜ್ಯ ಸರಕಾರದ ವತಿಯಿಂದ ಸ್ಥಾಪಿತಗೊಂಡಿರುವ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ (ಗೆಥ್ನಾ) ಬೆಂಗಳೂರಿನಲ್ಲಿದ್ದು ಬಹಳಷ್ಟು ಚಾರಣ, ಶಿಲಾರೋಹಣ, ಮಕ್ಕಳ ಶಿಬಿರಗಳು ಅಲ್ಲದೆ ಏರೋ ಸ್ಪೋರ್ಟ್ಸ್ ಮತ್ತು ಜಲಕ್ರೀಡೆಗಳನ್ನು  ಹಾಗೂ ಇತರೆ ಸಾಹಸ ಚಟುವಟಿಕೆಗಳನ್ನು ನಡೆಸುತ್ತಿದೆ.  ಈ ಸಂಸ್ಥೆಯು ಪ್ರತಿವರ್ಷ ರಾಜ್ಯ ಮತ್ತು ವಲಯ ಮಟ್ಟದ ಕೃತಕ ಗೋಡೆ ಹತ್ತುವ ಸ್ಪರ್ಧೆ, ರಾಷ್ಟ್ರ ಮಟ್ಟದ ಸ್ಪರ್ಧೆಗೆ ಅಭ್ಯರ್ಥಿಗಳನ್ನು ಆಯ್ಕೆಮಾಡುವ ಸ್ಪರ್ಧೆಗಳನ್ನು ನಡೆಸುತ್ತದೆ. ಖಾಸಗಿ ಸಂಸ್ಥೆಗಳ ಪೈಕಿ ಯೂತ್ ಹಾಸ್ಟಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಅತ್ಯಂತ ಹಳೆಯದು.   1966ರಲ್ಲಿ ಪ್ರಾರಂಭವಾದ ಕರ್ನಾಟಕ ಪರ್ವತಾರೋಹಣ ಸಂಘವು ಹಲವಾರು ಚಾರಣ, ಶಿಲಾರೋಹಣ, ಪರ್ವತಾರೋಹಣ ಮತ್ತು ಮಕ್ಕಳ ಶಿಬಿರಗಳನ್ನು ಏರ್ಪಡಿಸುತ್ತಿದೆ. ಇವಲ್ಲದೆ, ಸ್ಪಾರ್ಕ್, ವೈಲ್ಡ್‍ಟ್ರಾಕ್, ಹಿಲ್‍ಟಾಪ್ ಇವೇ ಮುಂತಾದ ಇನ್ನೂ ಹಲವು ಸಂಘಗಳು ಈ ಚಟುವಟಿಕೆಗಳನ್ನು ನಡೆಸುತ್ತಿವೆ.										
(ಬಿ.ವಿ.ಪ್ರಕಾಶ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ